ಭಯ ಯಾರಿಗೆ ಇಲ್ಲ ಹೇಳಿ, ಕೆಲವೊಬ್ಬರು ಹಾವುಗಳನ್ನು ಕಂಡು ಭಯಪಟ್ಟರೆ, ಇನ್ನೂ ಹಲವರಿಗೆ ದೆವ್ವಗಳೆಂದರೆ ಭಯ, ಕೆಲವರಿಗೆ ನೀರಿನ ಭಯವಿದ್ದರೇ ಇನ್ನೂ ಕೆಲವರಿಗೆ ಎತ್ತರದ ಭಯ ಹೀಗೆ ಪ್ರತಿಯೊಬ್ಬರಿಗೂ ಇಂದೊಂದು ರೀತಿಯ ಭಯ, ಫೋಬಿಯಾ ಇದ್ದೇ ಇರುತ್ತದೆ. ಆದರೆ ಇಲ್ಲೊಬ್ಬ ಮನುಷ್ಯನಿಗೆ ಹೆಂಗಸರನ್ನು ಕಂಡರೆ ಭಯವಂತೆ. ಈ ಹೆಂಗಸರ ಭಯಕ್ಕೆ ಈತ ಬರೋಬ್ಬರಿ 55 ವರ್ಷಗಳಿಂದ ಮನೆಯಿಂದ ಹೊರಗೆ ಬಂದೇ ಇಲ್ಲ. ಕರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ನಾವೆಲ್ಲರೂ ಹೋಮ್ ಕ್ವಾರೆಂಟೈನ್ನಲ್ಲಿದ್ದೆವು, ಆದರೆ ಈತ ಹೆಂಗಸರ ಭಯಕ್ಕೆ 55 ವರ್ಷಗಳ ಹಿಂದೇಯೇ ಹೋಮ್ಕ್ವಾರೆಂಟೈನ್ನಲ್ಲಿರಲು ಆರಂಭಿಸಿದ್ದಾನೆ. ಅಷ್ಟಕ್ಕೂ ಈ ಮನುಷ್ಯನಿಗೆ ಮಹಿಳೆಯರೆಂದರೆ ಯಾಕಿಷ್ಟು ಭಯ ಎಂದು ಯೋಚಿಸುತ್ತಿದ್ದೀರಾ?
Viral News: ಹೆಂಗಸರ ಭಯಕ್ಕೆ ಬರೋಬ್ಬರಿ 55 ವರ್ಷಗಳಿಂದ ಮನೆಯಿಂದ ಹೊರಗೆ ಬರದ ವ್ಯಕ್ತಿ
ಅಂತರಾಷ್ಟ್ರೀಯ ವರದಿಗಳ ಪ್ರಕಾರ, ಈ ವಿಚಿತ್ರ ಘಟನೆ ನಡೆದಿರುವಂತಹದ್ದು ಆಫ್ರಿಕಾದ ರುವಾಂಡಾ ದೇಶದಲ್ಲಿ. ಇಲ್ಲಿನ ಕಲಿಟೆಕ್ಸ್ ನ್ಯಾಮ್ವಿಟಾ ಎಂಬ 71 ವರ್ಷ ವಯಸ್ಸಿನ ವ್ಯಕ್ತಿ ಹೆಂಗಸರ ಭಯಕ್ಕೆ ಬರೋಬ್ಬರಿ 55 ವರ್ಷಗಳ ಕಾಲ ಮನೆಯಿಂದ ಹೊರ ಬಾರದೆ, ಪ್ರತಿದಿನ ಪ್ರತಿ ಕ್ಷಣ ಬೀಗ ಹಾಕಿಕೊಂಡು ಮನೆಯ ಒಳಗಡೆಯೇ ವಾಸಿಸುತ್ತಿದ್ದ.
ಈತ 16 ವರ್ಷದವನಾಗಿದ್ದಾಗ, ಮಹಿಳೆಯರ ಸಹವಾಸವನ್ನು ತಪ್ಪಿಸಲು ಬೀಗ ಹಾಕಿಕೊಂಡು ಮನೆಯಿಂದ ಹೊರಬಾರದೆ ಮನೆಯ ಒಳಗಡೆಯೇ ವಾಸಿಸಲು ಪ್ರಾರಂಭಿಸಿದ್ದಾನೆ. ಅಷ್ಟೇ ಅಲ್ಲದೆ ಮನೆಯ ಬಳಿ ಯಾರು ಬರಬಾರದೆಂದು ಮನೆಯ ಸುತ್ತ 15 ಅಡಿ ಎತ್ತರದ ಬೇಲಿಯನ್ನು ಕೂಡಾ ನಿರ್ಮಿಸಿಕೊಂಡಿದ್ದಾನೆ. ಹೆಂಗಸರಿಂದ ಈತ ದೂರವಿದ್ದರೂ, ಅವನ ಮನೆಯ ಸುತ್ತಮುತ್ತಲಿನ ಮಹಿಳೆಯರು ಮಾನವೀಯತೆಯ ದೃಷ್ಟಿಯಿಂದ ಈತನಿಗಾಗಿ ಆಹಾರ ಮತ್ತು ದಿನಸಿ ಸಾಮಾಗ್ರಿಗಳನ್ನು ಈತನ ಮನೆಯ ಮುಂದೆ ತಂದಿಡುತ್ತಿದ್ದರು. ಹಾಗೂ ಈ ಮನುಷ್ಯ ಯಾರು ಓಡಾಡದ ಸಮಯದಲ್ಲಿ ಮನೆಯಿಂದ ಮೆಲ್ಲಗೆ ಹೊರ ಬಂದು ಆ ದಿನಸಿ ಸಾಮಾಗ್ರಿಗಳನ್ನು ಮನೆಯ ಒಳಗೆ ತೆಗೆದುಕೊಂಡು ಹೋಗುತ್ತಿದ್ದ. ಅಷ್ಟಕ್ಕೂ ಈತ ಮಹಿಳೆಯರನ್ನು ಕಂಡರೆ ಯಾಕಿಷ್ಟು ಭಯ ಪಡುತ್ತಾನೆ ಎಂದು ನೀವು ಯೋಚಿಸುತ್ತಿದ್ದೀರಾ?
ಈ ವ್ಯಕ್ತಿ ಗೈನೋಫೋಬಿಯಾ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಇದೇ ಕಾರಣಕ್ಕೆ ಹೆಂಗಸರನ್ನು ಕಂಡರೆ ಭಯ ಪಡುತ್ತಾನೆ. ಗೈನೋಫೋಬಿಯಾ ಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ವಿರುದ್ಧ ಲಿಂಗದವರನ್ನು ಕಂಡಾಗ, ಅವರ ಬಗ್ಗೆ ಯೋಚಿಸಿದಾಗ ಭಯ ಪಡುತ್ತಾರೆ. ಇಷ್ಟೇ ಅಲ್ಲ, ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಆತಂಕದ ಭಾವನೆಯನ್ನು ಸಹ ಅನುಭವಿಸುತ್ತಾನೆ. ಪ್ಯಾನಿಕ್ ಅಟ್ಯಾಕ್, ಅತಿಯಾದ ಬೆವರುವಿಕೆ, ತ್ವರಿತವಾಗಿ ಹೃದಯ ಬಡಿತ ಮತ್ತು ಉಸಿರಾಟದಲ್ಲಿ ತ್ವರಿತ ಏರಿಕೆ ಇವೆಲ್ಲಾ ಫೋಬಿಯಾದ ಲಕ್ಷಣಗಳಾಗಿವೆ.